ಸ್ಮೈಲ್ ಪ್ಲೀಸ್ ಚಿತ್ರೀಕರಣ ಮುಕ್ತಾಯ
Posted date: 06 Fri, May 2016 – 09:02:01 AM

ಕೆ. ಮಂಜು ಸಿನಿಮಾಸ್ ಲಾಂಛನದಡಿಯಲ್ಲಿ ನಿರ್ಮಾಪಕ ಕೆ. ಮಂಜು ನಿರ್ಮಿಸುತ್ತಿರುವ ಸ್ಮೈಲ್ ಪ್ಲೀಸ್ ಚಿತ್ರದ ಚಿತ್ರೀಕರಣವು ಇತ್ತೀಚೆಗೆ ನಗರದಲ್ಲಿ ಮುಕ್ತಾಯಗೊಂಡಿತು.
೩೫ ದಿವಸಗಳ ಕಾಲ ಕನಕಪುರ, ಬೆಂಗಳೂರು, ಪಡುಬಿದ್ರಿ, ಸಕಲೇಶಪುರ ಸುತ್ತಮುತ್ತ ಮೂರು ಹಾಡುಗಳನ್ನು ಹಾಗೂ ಹಲವಾರು ಸನ್ನಿವೇಶಗಳನ್ನು ಜೆ.ಎಸ್. ವಾಲಿ ಛಾಯಾಗ್ರಹಣದಲ್ಲಿ ನಿರ್ದೇಶಕ ರಘುಸಮರ್ಥ್ ಚಿತ್ರಿಸಿಕೊಂಡರು.
ಚಿತ್ರಕ್ಕೆ ಎರಡು ಗೀತೆಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದ್ದು, ಅದನ್ನು ಸದ್ಯದಲ್ಲಿಯೇ ಚಿತ್ರಿಸಿಕೊಳ್ಳಲಾಗುವುದೆಂದು ನಿರ್ಮಾಪಕ ಕೆ. ಮಂಜು ತಿಳಿಸಿದ್ದಾರೆ.
ಚಿತ್ರಕ್ಕೆ ಜೆ.ಎಸ್. ವಾಲಿ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ, ಕವಿರಾಜ್ ಸಾಹಿತ್ಯ, ಮದನ್ ಹರಿಣಿ, ತ್ರಿಭುವನ್ ನೃತ್ಯ, ಅನುಪ್ ಸೀಳನ್ ಸಂಗೀತ, ಜೋನಿ ಹರ್ಷ ಸಂಕಲನ, ಮೋಹನ್ ಪಂಡಿತ್ ಕಲೆ, ಮದನ್‌ರಾಮ್ ವೆಂಕಟೇಶ್ ನಿರ್ದೇಶನ ಸಹಕಾರ, ಬಿ. ಸುರೇಶ್ ನಿರ್ಮಾಣ ಮೇಲ್ವಿಚಾರಣೆ ಇದ್ದು, ಟಿ.ಎನ್. ಸೀತಾರಾಮ್ ಬಳಿ ಸಹನಿರ್ದೇಶಕರಾಗಿ ಹಾಗೂ ಹಲವಾರು ಟಿವಿ ಧಾರಾವಾಹಿಗಳಿಗೆ ಸಂಭಾಷಣೆಯನ್ನು ಬರೆದ ರಘು ಸಮರ್ಥ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ತಾರಾಗಣದಲ್ಲಿ ಗುರುನಂದನ್ (ಫಸ್ಟ್ ರ‍್ಯಾಂಕ್ ರಾಜು ಖ್ಯಾತಿ), ಕಾವ್ಯಶೆಟ್ಟಿ, ನೇಹಾ ಪಾಟೀಲ್, ರಂಗಾಯಣರಘು, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣಾ ಬಾಲರಾಜ್, ರವಿಭಟ್, ಲಿಖಿತೇಶ್ ಮುಂತಾದವರಿದ್ದಾರೆ.  


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed